Monday, December 26, 2011

*ನಾನಾದೆ ಅಪರಾಧಿ*

*ಶೋಕ ಶಾಕುಂತಲೆ*

ನಿನ್ನ ತನು ಮನ ಶಾಖ ಸೋಕಿ
ಮೈ ಮನ ಪುಳಕಿತ,
ಚಂಚಲ ಮನಸಿದು ಕುಸಿದು
ತನು ಬೆಸೆದು ಹಸಿದ
ಆಸೆಗಳಿಗೆ ಕ್ಷಣ-ಕ್ಷಣ ತರ್ಪಣ

ಉಂಡೆದ್ದು ಬರಿದಾಗಿ ಹೋದವ ನೀನು
ನೆನಪಿನ ಉಂಗುಷ್ಟವ ಪಡೆದವಳು ನಾನು...

ನೀನೀತ್ತ ಉಂಗುಷ್ಟ ಹಸ್ತದಲ್ಲಿತ್ತು
ಬಿತ್ತ ನೆನಪಿಗೆ ಕೈ-ಕಾಲು ಮೂಡಿತ್ತು..
ಜಗ ಜರಿಯುವಾ ಮುನ್ನವೇ,
ನಾ ನಿನ್ನವಳಾಗಬೇಕಿತ್ತು...

ನಾನ್ ಹೊರಟೆ ನಿನ್ನ ಮನದ ಅರಮನೆಯಂಗಳಗ್ಕೆ...


ಮುನಿಯ ಶಾಪವೋ...
ಕವಿಯ ಪಕ್ಷಪಾತವೋ...
ಇಲ್ಲಾ ಗಂಡಸರ ಸುಳ್ಳೇ ಹಾಳು ಮರೆವೋ...
ಉಂಗುಷ್ಟ ನದಿಯಲಿ ಬಿತ್ತು ನಿನಗೋ ಮರೆವು ಕಾಡಿತ್ತು

ಎಡವಿದ್ದು ಜೋಡಿ ಮನಗಳಾದರೂ ಶಿಕ್ಷೆಯ ಅನುಭವ ಮಾತ್ರ ನನ್ನೊಂಟಿ- ಕಾಲ್ಗಳಿಗೆ
ನಾನಾದೆ ಅಪರಾಧ

3 comments:

  1. *ನಾನಾದೆ ಅಪರಾಧಿ*

    *ಶೋಕ ಶಾಕುಂತಲೆ*

    ನಿನ್ನ ತನು ಮನ ಶಾಖ ಸೋಕಿ
    ಮೈ ಮನ ಪುಳಕಿ , baredaddu dinaaka 26/12/2011/ baredavaru prathap brahmavar..:)

    ReplyDelete
  2. `ಶಾಕುಂತಲೆ'ಯ ಅ೦ತರ೦ಗದ ವೇದನೆಯ ಕವನ ಚೆನ್ನಾಗಿದೆ ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete