Monday, February 17, 2020

ಅಲ್ಪ ವಿಹಾರಿ

             


ಮತ್ತದೇ ಮತ್ತಿನ ಮೌನ ಮುತ್ತಿಕ್ಕುವಾಗ...

ಧುಮ್ಮಿಕ್ಕುವ ಬಯಕೆಗಳ ಹತ್ತಿಕ್ಕುವ

ನೀರವ ನೆನಪ ಅಲೆಗಳಲಿ...

ಅದೋ.. 

ಬದಿ ದಡದ ದಂಡೆಯಲ್ಲಿ

ಅಲೆಯೋ ಅಲೆಮಾರಿ ನಾನು...


ತಲುಪಿ ಯೂ ತಲುಪದಂತೆ...

ಸೋಕಿಯು ಸೋಕದಂತೆ...

ಪಡೆದೂ ಪಡೆಯದಂತೆ...


ಮತ್ತು ಮತ್ತಷ್ಟು... ಪಡೆದು

ಮೊಗೆದು.. ಮೊಗೆ ಮೊಗೆದು...
ಏನೋ ಪಡೆದಂತೆ... 

ಮತ್ತಿನ್ನೆನ್ನನೋ ಪಡೆಯಬೇಕಿತ್ತೆನ್ನೋ

ಎಂತೇನಿಸೋವಂತೆ...

ಅಸ್ಪಷ್ಟ... 

ಅಲ್ಪ ತೃಪ್ತಿಯ ಹಾದಿಯಲಿ

ನಡೆ ಮರಳಿ ಮರಳ ಗೊಡೆದೆಗೆ...

ಕುಸಿವ ವಾಸ್ತವ್ಯಕ್ಕೆ  ...

ಭ್ರ ಮೆಯ  ಬೋಣಿ ದೋಣಿ ಬದಿಗೆ...

 ಹಾಕುತ ಹೊಸ ಬಗೆಯ ಬಾಡಿಗೆಯ

 ಬಡಿಗೆ ಹುಟ್ಟು...


Tuesday, January 1, 2019

ಗೋಜು

ಇದೋ  ಈ  ಕಡೆಗೊಂದು  ದಡ

ಅದೋ  ಆ ಕಡೆಗೊಂದು  ದಡ

ನಡುವೆ  ಹರಿವ  ಕುಡಿವ  ನದಿ

ನೀರಾಗಬೇಕು  ನಾ...

ಆವಿಯಾಗುವ  (ಮೌನಿಯಾಗುವ ) ಮುನ್ನ 

ಪ್ರತಾಪ್  ಬ್ರಹ್ಮಾವರ್.

Friday, August 31, 2018

@ಗೋಜು....@

@ಗೋಜು....@

ಒಪ್ಪಿದರೆ  ನೀವು

ಬಿಕ್ಕುವೆನು ನಾನು

ಸಿಗಬಹುದೇ ಒಪ್ಪಿಗೆ....

ಶಿಕ್ಷೆ  ಎಷ್ಟಾದರೂ ಸಹಿಸುವೆನು.... ನನ್ನ 

ತಪ್ಪಿಗೆ.

ಭಿಕೊ ಎನ್ನುವ  ಮಾನವ ಸಂತೆಯಲಿ

ಏಕೋ ಏಕಾಂಗಿ ನಾನು...

ಅಪರೂಪಕೆ ಸಿಕ್ಕ ಮನಸುಳ್ಳ ಜನ

ನೆನಪ ಭಿತ್ತಿಯಲಿ ಅಸ್ಪಷ್ಟ ಚಿತ್ರ...

ಧರಣಿಯೊಳಗಿನ  ಬಂಧಿಯೇ ನಾನು...

ಪರಿಮಾಣದ ದಾಳವೊ....?

ಇಲ್ಲಾ...

ಮುಕ್ತ ಭ್ರಮಾ ಪರಿಧಿಯೊಳಗಿನ

ಪರಮಾಣುವಿನ ಅಣುವೋ... ಅರಿಯೇ

ಬಿಕ್ಕುವೆನು...

ನಾನು..

ಗಂಡಸೆನುವ ಮುಖವಾಡ ಕಳಚಿ

ತಪ್ಪಾದರೆ ಕ್ಷಮಿಸಿ ಬಿಡಿ...


Monday, June 11, 2018

Nenapu

ಮಳೆಗಾಲ

ಕೂಡಿಟ್ಟ ನೆನಪುಗಳ ಕಾಪಿಡುವ

ಕಪಾಟು...

ಕ್ಷಣಕಾಲ  ತೆಗೆದಿಡು...

ಹರಡುವ ಸ್ಮರಣಿಕೆಗೆ

ಮುಚ್ಚಿಟ್ಟ ಅಮ್ಮನ ನಶ್ಯದ ಡಬ್ಬಿಯೊಳಗಿನ

ಹಿತ ಘಾಟು...

ಪ್ರತಾಪ್ ಬ್ರಹ್ಮಾವರ್..

Monday, May 21, 2018

ಹುಷಾರು.....

ಹುಷಾರು.....

ಬರಬಹುದು ನಿಮಗೆ

ಅಪರಿಚಿತ ದೂರವಾಣಿ ಕರೆ....

ಯಾಮಾರಿದರೆ

ಬೀಳೊತ್ತೇ

ನಿಮ್ಮ ಉಳಿತಾಯ ಖಾತೆಗೆ ಬರೆ..

Sunday, August 13, 2017

Hmmm

ಹೇಳೋ ಮಾತ  ಕೇಳೊ

ಕಿವಿಯೊಂದುಬೇಕು ತಾಯಿ ಹೃದಯಕೆ...

ಸುಖಾ ಸುಮ್ಮನೆ

ಹುಡುಕಬೇಡಿ ವಿಶೇಷ ವಿಷಯಕೆ

ಹ್ಮ್...ಹ್ಮ್...
ಹ್ಮ್ಂಗುಟ್ಟುವಿಕೆ....

ಸಾಕೆ ಸಾಕು...

ನಾಲ್ಕೆ ನಾಲ್ಕು...

ಉಲ್ಲಾಸ ಸಂತೋಷ ವದನಕೆ...

ಪ್ರತಾಪ್ ಬೃಹ್ಮಾವರ್..

Monday, July 17, 2017

Novu...

ನೋವು...

ಒಳ    ಉಳಿದರೆ   ವ್ಯಥೆ....

ಹೊರ ಹರಿದರೆ ಕವಿತೆ....

ಒಳಗುಳಿದರೆ  ವ್ಯಥೆ...

ಹೊರಗರಿದರೆ ಕವಿತೆ...