Monday, December 26, 2011

Shoka shaakuntale

*ನಾನಾದೆ ಅಪರಾಧಿ*

*ಶೋಕ ಶಾಕುಂತಲೆ*

ನಿನ್ನ ತನು ಮನ ಶಾಖ ಸೋಕಿ
ಮೈ ಮನ ಪುಳಕಿತ,
ಚಂಚಲ ಮನಸಿದು ಕುಸಿದು
ತನು ಬೆಸೆದು ಹಸಿದ
ಆಸೆಗಳಿಗೆ ಕ್ಷಣ-ಕ್ಷಣ ತರ್ಪಣ

ಉಂಡೆದ್ದೂ ಬರಿದಾಗಿ ಹೋದವ ನೀನು
ನೆನಪಿನ ಉಂಗುಷ್ಟವ ಪಡೆದವಳು ನಾನು...

ನೀನೀತ್ತ ಉಂಗುಷ್ಟ ಹಸ್ತದಲ್ಲಿತ್ತು
ಬಿತ್ತ ನೆನಪಿಗೆ ಕೈ-ಕಾಲು ಮೂಡಿತು..
ಜಗ ಜರಿಯುವಾ ಮುನ್ನವೇ,
ನಾ ನಿನ್ನವಳಾಗಬೇಕಿತ್ತು...

ನಾನ್ ಹೊರಟೆ ನಿನ್ನ ಮನದ ಅರಮನೆಯಂಗಳಗ್ಕೆ...


ಮುನಿಯ ಶಾಪವೋ...
ಕವಿಯ ಪಕ್ಷಪಾತವೋ...
ಎಡವಿದ್ದು ಜೋಡಿ ಮನಗಳಾದರೂ ಶಿಕ್ಷೆಯ ಅನುಭವ ಮಾತ್ರ ನನ್ನೊಂಟಿ- ಕಾಲ್ಗಳಿಗೆ
ನಾನಾದೆ ಅಪರಾಧಿ

No comments:

Post a Comment