Thursday, December 8, 2011

ಧ್ವಂದ್ವ

*ಮೌನ ಮಂಟಪ*

*ಮಾತಿನ ಮನೆ*

ಮಾತನಾಡದ ಮೌನವೊಂದು ಮಾತನಾಡದೆ ಮೌನವಾಗಿದೆ..

ಕಳಚಿಟ್ಟ ಕಾಲ ಕೌತುಕ ಕಾತರಿಸಿ ಕತ್ತೇರಿದೆ ಕಣ್ಣೇರಿಸಿದೆ...

ನೀಗಲಾರದ ನಿಲುವುಗಳಿಗೆ ನಿಲುಕಿ
ನಯನಗಳ ನೀರೀಕ್ಷೆ ನೂರ್ಮಡಿಸಿದೆ.

ಗರಿಗೆದರದ ಗುರಿಯ ಗೆಜ್ಜೆ
ಗಮ್ಯಗಳ ಗವಿಯೊಳಗೆ ಗುಂಯ್ಗುಟ್ಟಿವೆ..

ಸೇರಲಾರದ ಸವಿನುಡಿಗಳು ಸೇರಲಾರದೆ ಸೇರಿ ಸವಿಯಸೂರೊಂದನಾ ಸೂರೆಮಾಡಿವೆ..
********

ಒಂದು ವಿಭಿನ್ನ ಪ್ರಯತ್ನ... ಒಂದೇ ಕವಿತೆಯಲ್ಲಿ ಎರಡು ಭಾವಗಳನ್ನಾ (ಅಭಾಸಗಳನ್ನಾ) ಹೊರಹೊಮ್ಮಿಸುವಾ ಪುಟ್ಟ ಪ್ರಯತ್ನ.. ನಿಮಗೇನನ್ನಿಸಿತು ! ?

2 comments:

  1. `ಮಾತಿನೊಳಗಿನ ಮೌನ , ಮೌನದೊಳಗಿನ ಮಾತು!' ಪ್ರಯತ್ನ ಉತ್ತಮವಾಗಿದೆ, ಅಭಿನಂದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  2. ಖಂಡಿತಾ :-) ಧನ್ಯವಾದಗಳು ಪ್ರಭ ಜಿ,

    ReplyDelete