Friday, December 30, 2011

*ಪ್ರೇಮ- ಕುರುಡು- ಪ್ರೇಮ*

ವಾಸ್ತವ ಕವಿತೆಗಳಿಗೆ ಮೈ-ನವಿಲುಗಣ್ಣು ! ?...

ಅದಕೆ,

ಕಣ್ಣ್ಮುಚ್ಚಿ ಬರೆವೆ ಪ್ರೇಮಗವಿತೆ ಭಾವಗಳ ಬಣ್ಣದಿ ಅದ್ದಿ-ತಿದ್ದಿ ಸಿಂಗರಿಸಿ

ಅಂದಕೆ... :)

*ಪ್ರೇಮ- ಕುರುಡು- ಪ್ರೇಮ*

ವಾಸ್ತವ ಕವಿತೆಗಳಿಗೆ ಮೈ-ನವಿಲುಗಣ್ಣು ! ?... ಅದಕೆ, ಕಣ್ಣ್ಮುಚ್ಚಿ ಬರೆವೆ ಪ್ರೇಮಗವಿತೆ ಭಾವಗಳ ಬಣ್ಣದಿ ಅದ್ದಿ-ತಿದ್ದಿ ಸಿಂಗರಿ ಅಂದಕೆ... :)

Thursday, December 29, 2011

*ಕವಿತೆ*
ನಿನ್ನನು ಅರಸುತಾ ನಾನಲ್ಲೇಲ್ಲೋ
ಅಲೆಯುವ ಅಲೆಮಾರಿ ,

ನೀ ಹುಡುಕುವಾ ಬಳ್ಳಿ ಪಾದ(ಪದ)ಗಳಲಿ ಪವಡಿಸಿತೆನುವಾ ಸುಕುಮಾರಿ

Tuesday, December 27, 2011

*ಹನಿ ಸಂದೇಶ್*

ಹುಡುಗಿ ಕೈಕೊಟ್ಟಳೆಂದು ,
ತುಟ್ಟಿ ಸಿಗರೇಟನಾ ಎದೆಯೊಳಗೆ
ಭಟ್ಟಿ ಇಳಿಸಿದ,

ಕೆಮ್ಮು-ದಮ್ಮು ಬಂತೆಂದು
ವೈದ್ಯನ ಬಳಿ ಓಡಿದರೆ '
ದುಬಾರಿ ಬಿಲ್ ಕೊಟ್ಟು
"ಧೂಮಪಾನ ಆರೋಗ್ಯಕೆ ಹಾನಿಕರ" ವೆಂದು ವೈದ್ಯ ಬೆನ್-ತಟ್ಟಿ ಕಳಿಸಿದ :-)

Hani

*ಹನಿ ಸಂದೇಶ್*

ಹುಡುಗಿ ಕೈಕೊಟ್ಟಳೆಂದು ,
ತುಟ್ಟಿ ಸಿಗರೇಟನಾ ಎದೆಯೊಳಗೆ
ಭಟ್ಟಿ ಇಳಿಸಿದ,

ಕೆಮ್ಮು-ದಮ್ಮು ಬಂತೆಂದು
ವೈಧ್ಯನ ಬಳಿ ಓಡಿದರೆ '
ದುಬಾರಿ ಬಿಲ್ ಕೊಟ್ಟು
"ಧುಮಪಾನ ಆರೋಗ್ಯಕೆ ಹಾನಿಕರ" ವೆಂದು ವೈದ್ಯ ಬೆನ್-ತಟ್ಟಿ ಕಳಿಸಿದ :-)

Monday, December 26, 2011

*ನಾನಾದೆ ಅಪರಾಧಿ*

*ಶೋಕ ಶಾಕುಂತಲೆ*

ನಿನ್ನ ತನು ಮನ ಶಾಖ ಸೋಕಿ
ಮೈ ಮನ ಪುಳಕಿತ,
ಚಂಚಲ ಮನಸಿದು ಕುಸಿದು
ತನು ಬೆಸೆದು ಹಸಿದ
ಆಸೆಗಳಿಗೆ ಕ್ಷಣ-ಕ್ಷಣ ತರ್ಪಣ

ಉಂಡೆದ್ದು ಬರಿದಾಗಿ ಹೋದವ ನೀನು
ನೆನಪಿನ ಉಂಗುಷ್ಟವ ಪಡೆದವಳು ನಾನು...

ನೀನೀತ್ತ ಉಂಗುಷ್ಟ ಹಸ್ತದಲ್ಲಿತ್ತು
ಬಿತ್ತ ನೆನಪಿಗೆ ಕೈ-ಕಾಲು ಮೂಡಿತ್ತು..
ಜಗ ಜರಿಯುವಾ ಮುನ್ನವೇ,
ನಾ ನಿನ್ನವಳಾಗಬೇಕಿತ್ತು...

ನಾನ್ ಹೊರಟೆ ನಿನ್ನ ಮನದ ಅರಮನೆಯಂಗಳಗ್ಕೆ...


ಮುನಿಯ ಶಾಪವೋ...
ಕವಿಯ ಪಕ್ಷಪಾತವೋ...
ಇಲ್ಲಾ ಗಂಡಸರ ಸುಳ್ಳೇ ಹಾಳು ಮರೆವೋ...
ಉಂಗುಷ್ಟ ನದಿಯಲಿ ಬಿತ್ತು ನಿನಗೋ ಮರೆವು ಕಾಡಿತ್ತು

ಎಡವಿದ್ದು ಜೋಡಿ ಮನಗಳಾದರೂ ಶಿಕ್ಷೆಯ ಅನುಭವ ಮಾತ್ರ ನನ್ನೊಂಟಿ- ಕಾಲ್ಗಳಿಗೆ
ನಾನಾದೆ ಅಪರಾಧ
*ನಾನಾದೆ ಅಪರಾಧಿ*

*ಶೋಕ ಶಾಕುಂತಲೆ*

ನಿನ್ನ ತನು ಮನ ಶಾಖ ಸೋಕಿ
ಮೈ ಮನ ಪುಳಕಿತ,
ಚಂಚಲ ಮನಸಿದು ಕುಸಿದು
ತನು ಬೆಸೆದು ಹಸಿದ
ಆಸೆಗಳಿಗೆ ಕ್ಷಣ-ಕ್ಷಣ ತರ್ಪಣ

ಉಂಡೆದ್ದು ಬರಿದಾಗಿ ಹೋದವ ನೀನು
ನೆನಪಿನ ಉಂಗುಷ್ಟವ ಪಡೆದವಳು ನಾನು...

ನೀನೀತ್ತ ಉಂಗುಷ್ಟ ಹಸ್ತದಲ್ಲಿತ್ತು
ಬಿತ್ತ ನೆನಪಿಗೆ ಕೈ-ಕಾಲು ಮೂಡಿತ್ತು..
ಜಗ ಜರಿಯುವಾ ಮುನ್ನವೇ,
ನಾ ನಿನ್ನವಳಾಗಬೇಕಿತ್ತು...

ನಾನ್ ಹೊರಟೆ ನಿನ್ನ ಮನದ ಅರಮನೆಯಂಗಳಗ್ಕೆ...


ಮುನಿಯ ಶಾಪವೋ...
ಕವಿಯ ಪಕ್ಷಪಾತವೋ...
ಇಲ್ಲಾ ಗಂಡಸರ ಸುಳ್ಳೇ ಹಾಳು ಮರೆವೋ...
ಉಂಗುಷ್ಟ ನದಿಯಲಿ ಬಿತ್ತು ನಿನಗೋ ಮರೆವು ಕಾಡಿತ್ತು

ಎಡವಿದ್ದು ಜೋಡಿ ಮನಗಳಾದರೂ ಶಿಕ್ಷೆಯ ಅನುಭವ ಮಾತ್ರ ನನ್ನೊಂಟಿ- ಕಾಲ್ಗಳಿಗೆ
ನಾನಾದೆ ಅಪರಾಧ

Shoka shaakuntale

*ನಾನಾದೆ ಅಪರಾಧಿ*

*ಶೋಕ ಶಾಕುಂತಲೆ*

ನಿನ್ನ ತನು ಮನ ಶಾಖ ಸೋಕಿ
ಮೈ ಮನ ಪುಳಕಿತ,
ಚಂಚಲ ಮನಸಿದು ಕುಸಿದು
ತನು ಬೆಸೆದು ಹಸಿದ
ಆಸೆಗಳಿಗೆ ಕ್ಷಣ-ಕ್ಷಣ ತರ್ಪಣ

ಉಂಡೆದ್ದೂ ಬರಿದಾಗಿ ಹೋದವ ನೀನು
ನೆನಪಿನ ಉಂಗುಷ್ಟವ ಪಡೆದವಳು ನಾನು...

ನೀನೀತ್ತ ಉಂಗುಷ್ಟ ಹಸ್ತದಲ್ಲಿತ್ತು
ಬಿತ್ತ ನೆನಪಿಗೆ ಕೈ-ಕಾಲು ಮೂಡಿತು..
ಜಗ ಜರಿಯುವಾ ಮುನ್ನವೇ,
ನಾ ನಿನ್ನವಳಾಗಬೇಕಿತ್ತು...

ನಾನ್ ಹೊರಟೆ ನಿನ್ನ ಮನದ ಅರಮನೆಯಂಗಳಗ್ಕೆ...


ಮುನಿಯ ಶಾಪವೋ...
ಕವಿಯ ಪಕ್ಷಪಾತವೋ...
ಎಡವಿದ್ದು ಜೋಡಿ ಮನಗಳಾದರೂ ಶಿಕ್ಷೆಯ ಅನುಭವ ಮಾತ್ರ ನನ್ನೊಂಟಿ- ಕಾಲ್ಗಳಿಗೆ
ನಾನಾದೆ ಅಪರಾಧಿ

Saturday, December 24, 2011

*ದೂರದ ಬೆಟ್ಟ*

ದೂರದ ಬಾನಂಗಳದ ಬೆಳದಿಂಗಳ ಚಂದಿರ ನೋಡಲು ಬಲು ಸುಂದರ....

ಆದರೂ

ಹತ್ತಿರದಿ ನೋಡಿದರೆ
ಅವನಲ್ಲೂ ಇವೆಯಲ್ಲಾನೂರಾರು
ಕಂದರ(ಕ)ಗಳ ಹಂದರ @ಸಪ್ತವಣ೯

*ಗಾದೆ ಹನಿ*

ದೂರದ ಬಾನಂಗಳದ ಬೆಳದಿಂಗಳ ಚಂದಿರ ನೋಡಲು ಬಲು ಸುಂದರ....

ಆದರೂ

ಹತ್ತಿರದಿ ನೋಡಿದರೆ
ಅವನಲ್ಲೂ ಇವೆಯಲ್ಲಾನೂರಾರು

ಕಂದರ(ಕ)ಗಳ ಹಂದರ @ಸಪ್ತವಣ೯

*ಗಾದೆ ಹನಿ*

*ಗಾದೆ ಹನಿ*

ಒಲ್ಲದ ಗ0ಡನಿಗೆ ,ಮೊಸರಲ್ಲು ಕಲ್ಲು...

ಅಯ್ಯೋ !!

ಮೊನ್ನೆ ಹೀಗೇ ಹೇಳಿದಕ್ಕೆ,

ಹೊಡೆದು ಉದುರಿಸಿಬಿಟ್ಲುರೀ

ನನ್ನೇಹೆಂಡ್ತಿ ನ0ದೇರಡ್ ಹಲ್ಲು

*ಗಾದೆ ಹನಿ*

ಒಲ್ಲದ ಗ0ಡ್ನಿಗೆ ,ಮೊಸರಲ್ಲು ಕಲ್ಲು...

ಅಯ್ಯೋ !!

ಮೊನ್ನೆ ಹೀಗೆ ಹೇಳಿದಕ್ಕೆ,

ಹೊಡೆದು ಉದುರಿಸಿಬಿಟ್ಲುರೀ

ನನ್ನೇಂಡ್ತಿ ನ0ದೇರಡ್ ಹಲ್ಲು

Wednesday, December 21, 2011

ನೆನಪು

ಅತ್ತ ರಾತ್ರಿಯ ನೆನಪುಗಳ , ಕರುಳ ಬಳ್ಳಿಯನು ಕತ್ತರಿಸಿಟ್ಟು ಬಿಟ್ಟಿದ್ದೇನೆ..

ಅವೋ !!

ಹಲ್ಲಿಯ ಬಾಲದಂತೆ ಮತ್ತೇ ಕಾಲನ ಜೋತೆ ಚಿಗುರಿಕೊಂಡು ಬಿಟ್ಟಿವೆ..

Monday, December 19, 2011

*ಕಾಂಚಾಣ*

ಕಾಸಿದ್ರೆ ಕೈಲಾಸ

ಎಂದವರು, ಕೆಲವರು

ಪಾಪ !!

ಅಪಾರ್ಥ ಮಾಡಿಕೊಂಡನೋ ಏನೋ !!

ಕೊನೆವರೆಗೂ ಕಾಸು ಕೂಡಿಟ್ಟ

ಬರಿಗೈಲಿ ಕೈಲಾಸಕೆ ಕಾಲಿಟ್ಟ..

Friday, December 16, 2011

*ಇಲ್ಲೋಬ್ಬ ದೇವದಾಸ*

ಅವನಿಗೋ ಸದಾ ಕುಡಿಯುವಾ ಹಪಾಹಪಿ...

ನೆಪ ಮಾತ್ರಕೆ

ನಾಲಿಗೆಯಲಿ ಅವಳ

ನಾಮದ ನೆನಪಿನ ಜಪ

Thursday, December 8, 2011

ಧ್ವಂದ್ವ

*ಮೌನ ಮಂಟಪ*

*ಮಾತಿನ ಮನೆ*

ಮಾತನಾಡದ ಮೌನವೊಂದು ಮಾತನಾಡದೆ ಮೌನವಾಗಿದೆ..

ಕಳಚಿಟ್ಟ ಕಾಲ ಕೌತುಕ ಕಾತರಿಸಿ ಕತ್ತೇರಿದೆ ಕಣ್ಣೇರಿಸಿದೆ...

ನೀಗಲಾರದ ನಿಲುವುಗಳಿಗೆ ನಿಲುಕಿ
ನಯನಗಳ ನೀರೀಕ್ಷೆ ನೂರ್ಮಡಿಸಿದೆ.

ಗರಿಗೆದರದ ಗುರಿಯ ಗೆಜ್ಜೆ
ಗಮ್ಯಗಳ ಗವಿಯೊಳಗೆ ಗುಂಯ್ಗುಟ್ಟಿವೆ..

ಸೇರಲಾರದ ಸವಿನುಡಿಗಳು ಸೇರಲಾರದೆ ಸೇರಿ ಸವಿಯಸೂರೊಂದನಾ ಸೂರೆಮಾಡಿವೆ..
********

ಒಂದು ವಿಭಿನ್ನ ಪ್ರಯತ್ನ... ಒಂದೇ ಕವಿತೆಯಲ್ಲಿ ಎರಡು ಭಾವಗಳನ್ನಾ (ಅಭಾಸಗಳನ್ನಾ) ಹೊರಹೊಮ್ಮಿಸುವಾ ಪುಟ್ಟ ಪ್ರಯತ್ನ.. ನಿಮಗೇನನ್ನಿಸಿತು ! ?

Wednesday, December 7, 2011

*ಕಲ್ಪನ ಬಯಕೆಗಳು..*

ತೆರೆದ ಮನಕೆ ಎತ್ತರಕೆ

ಹಾರುವ ಬಯಕೆ ,

ರೆಕ್ಕೆಗಳಿರುವುದು ಕಲ್ಪನೆ

ಕನಸುಗಳಿಗೆ ಹೊರತು

ವಾಸ್ತವವಗಳಿಗಲ್ಲವೆಂಬುವುದೆ

ಹೆದರಿಕೆ...

Friday, December 2, 2011

*ಕಾದಿಹಳು ರಾಧ*

ಮುರಳಿ ಮರಳಿ

ಬರುವನೆಂದು ಕಾದಿಹಳು

ರಾಧ.

ಜಗವನೆ

ಜಗಮಗಿಸಿದ

ಜಗದೊದ್ಧಾರ

ಮರೆತು ಹೋದುದು

ವಿಷಾದ

Thursday, December 1, 2011

*ಕುಸುರಿ*

ಹಸಿವೆಂಬ ಬಸಿರಿಗೆ ,

ನಿತ್ಯ ನೆಡೆಸಬೇಕು ಕಸರತ್ತು...


ಕಾಯ ಕುಸುರಿ ನೆಡೆಸಿದರಷ್ಟೇ

ಉದರಕ್ಕೊಂದು ತುತ್ತು...