Sunday, January 8, 2012

*ಧ್ವಂಧ್ವಗಳೊಡನೆ*

ಅಸಂಖ್ಯ ತಿರುವುಗಳ
ಅಭದ್ರ ಬಾಹುಗಳ
ಅನಿಶ್ಚಿತತೆಯ ಬದುಕಿನ ದಟ್ಟ-ದರಿದ್ರ ರಾತ್ರಿಯ ಒಂಟಿತನದ ಮನದ ಮುಂದೆ...

ಕವಳೊಡೆದ , ತಿರುವುಗಳ ದಾರಿಯಲಿ , ಕಣ್ತೇರೆದಿದ್ದರೂ , ಮಲಗಿರುತ್ತವೆ ಸುಪ್ತವಾಗಿ ಮನದಾಸೆಗಳು...
ಯಾವೊಂದು ತಿರುವುಗಳೊಡನೆ ಸಂಧಿಸಲಾಗದೆ ,
ಅನ್ಘನಾದ ತಿಮಿರದೊಡನೆ ಸೆಣಸಲಾಗದೆ...

ದುಗುಡ ತುಂಬಿದ ಮ್ರದು ಹ್ರದಯಗಳು ಮರಗುತ್ತವೆ ,ತೊಳಲಾಡುತವೆ ನಿವಾರಿಸಿಕೊಳಲಾಗದೆ ತನ್ನ್ಯಾವುದೇ ಸಂಶಯ...

ತಾ ನಡೆವ ದಾರಿಯಾ ತಿರುವು ಸರಿಯೆ !?
ತಪ್ಪೇ !?
ಯಾವೊಂದನು ಒಪ್ಪಿಕೊಳಾಗದೆ ನಿರಂತರ ಧ್ವಧ್ವಗಳೊಡನೆ , ಹೋರಾಡುತವೆ, ಪೂರ್ಣವಿರಾಮವಿಲ್ಲದೆ...
ಕೊಮ , ಅಲ್ಪ , ಅರ್ಧಚಂದ್ರಗಳೊಡನೆ ಜೊತೆಯಾಗಿ ನಡೆಯುತ್ತವೆ...

ಈ ನಡುವೆ ! ! !

ಸವೆಯುತ್ತವೆ ಬದುಕು.

No comments:

Post a Comment