Thursday, January 19, 2012

ಕಾಡದಿರು ನೆನಪೆ...

ಕಾಡದಿರು ನೆನಪೇ
ಕಾರಿರುಳ ರಾತ್ರಿ...
ಕಾದಿರುವಾ ಕಾಯವಿದು
ಕುದಿಯುವುದು ಖಾತ್ರಿ...

ಅತ್ತ ಬಾನಲಿ ಚಂದ್ರಮನ ಗೈರು
ಇತ್ತ ಮನದಲಿ ನಿನ್ನ ನೆನಪುಗಳ ಪೈರು
(ಬಿಡದೆ ನೀ ಬಡಿ-ಬಡಿದು ಕಾಡಿದರೆ ! ! ?)
ಕಣ್ಣ್-ರೆಪ್ಪೆ ಕದಲದು ಕತ್ತಲೆಗೆ ಹೆದರಿ(ದೆ)
ಮನ ಸಿಪ್ಪೆ ಸುಲಿಯದು ಚಿತ್ತವಿದು ಚೆದುರಿ(ದೆ)

ಭಂಡ ಒಂಟಿತನಕೆ
ಗಂಡನಾಗುವ ಬಯಕೆ
ಒಲ್ಲದ ಒಲವಿನ ವಧುವಿದು
ಮಿಥುನವಾದರೂ ಅದು ಬರಿ ಹಠಕೆ

ಅತ್ತ ಕಂಗಳನು ಒತ್ತಾಯಿಸಿ ಲಾಲಿಸುವೆ
ಚದುರಿದ ಚಿತ್ರಗಳಲಿ ಚಿತ್ತಾರವ ಚೈತ್ರಿಸುವೆ
ಅವನ(ಳ) ನೆನಪುಗಳಿಂದ ದೂರವಿಡು ಘಾಸಿಗೊಂಡ ಹ್ರದಯವಿದು ನೀನೇ ಕಾಪಿಡು

ಕಾಡದಿರು ನೆನಪೇ ಕಾರಿರುಳ ರಾತ್ರಿ...

1 comment:

  1. write 19/01/2012ಕಾಡದಿರು ನೆನಪೇ
    ಕಾರಿರುಳ ರಾತ್ರಿ...
    ಕಾದಿರುವಾ ಕಾಯವಿದು
    ಕುದಿಯುವುದು ಖಾತ್ರಿ...

    ಅತ್ತ ಬಾನಲಿ ಚಂದ್ರಮನ ಗೈರು
    ಇತ್ತ ಮನದಲಿ ನಿನ್ನ ನೆನಪುಗಳ ಪೈರು
    (ಬಿಡದೆ ನೀ ಬಡಿ-ಬಡಿದು ಕಾಡಿದರೆ ! ! ?)
    ಕಣ್ಣ್-ರೆಪ್ಪೆ ಕದಲದು ಕತ್ತಲೆಗೆ ಹೆದರಿ(ದೆ)
    ಮನ ಸಿಪ್ಪೆ ಸುಲಿಯದು ಚಿತ್ತವಿದು ಚೆದುರಿ(ದೆ)

    ಭಂಡ ಒಂಟಿತನಕೆ
    ಗಂಡನಾಗುವ ಬಯಕೆ
    ಒಲ್ಲದ ಒಲವಿನ ವಧುವಿದು
    ಮಿಥುನವಾದರೂ ಅದು ಬರಿ ಹಠಕೆ

    ಅತ್ತ ಕಂಗಳನು ಒತ್ತಾಯಿಸಿ ಲಾಲಿಸುವೆ
    ಚದುರಿದ ಚಿತ್ರಗಳಲಿ ಚಿತ್ತಾರವ ಚೈತ್ರಿಸುವೆ
    ಅವನ(ಳ) ನೆನಪುಗಳಿಂದ ದೂರವಿಡು ಘಾಸಿಗೊಂಡ ಹ್ರದಯವಿದು ನೀನೇ ಕಾಪಿಡು

    ಕಾಡದಿರು ನೆನಪೇ ಕಾರಿರುಳ ರಾತ್ರಿ...

    ReplyDelete