Friday, January 6, 2012

ಅತ್ರಪ್ತ ಕನಸುಗಳು , ನಾನು ಮತ್ತು ಬದುಕು.*

ಸತ್ತುಹೋಗಬೇಕೆಂದ ರಾತ್ರಿಗಳೆಲ್ಲಾ ,
ಅತ್ತು ಶರಣಾಗಿದ್ದೇನೆ , ನಿದಿರೆಗೆ ...

ಹಾಗೇ !!!

ಸತ್ತುಹೋದ ಆ ರಾತ್ರಿಗಳು ,
ನಿಶ್ಯಕ್ತ -ನಿರ್ಧಾರಗಳು,
ಅತ್ರಪ್ತ -ಆತ್ಮಗಳಾಗಿವೆ...

ಅವುಗಳೀಗ ನಿರಂತರವಾಗಿ,
ಅಲೆ-ಅಲೆಯಾಗಿ ತೇಲಿಬಿಡುತಿವೆ ,
ಸಂದೇಶವಾ ,
ಈ ಬದುಕು ನಮದಲ್ಲಾ ಬಾ ಸಾಯೋಣಾ ,
ಮತ್ತೋಮ್ಮೇ ಹುಟ್ಟಿ ಬರುವಾ ಜೀವಂತಿಕೆಯೊಡನೆ... ! !

ಮನಸು ಸಮಜಾಯಿಸುತ್ತದೆ,
ತಡೆಯೊಂದಿಷ್ಟು ದಿನ , ಮಾಡುವ ಮಾಡಲೇಬೇಕಾದ ಕರ್ತವ್ಯಗಳುಂಟು ಇನ್ನೋಂದಿಷ್ಟೇಂದು
ನನ್ನನು -ತನ್ನ ಬಾಹುಬಂಧನ್ಕೊಳಪಡಿಸಿ ಚುಂಬಿಸಿ , ಮತ್ತೇರಿಸಿ , ಮತ್ತೇ ತೆಕ್ಕೆಗೆ ಸೆಳೆದುಕೊಳ್ಳುತ್ತದೆ , ಬದುಕಿನತ್ತ ಕರೆದು ನೆಡೆಸಿಕೊಂಡೊಯುತ್ತದೆ...
ನಾನು ಮತ್ತೇ ಬದುಕಿನತ್ತ ಮುಖಮಾಡುತ್ತೇನೆ ಮುಗ್ಧನಂತೆ .. !! ?
ಅದು ಕೇಳುವಾ ಪ್ರಶ್ನೆಗಳಿಗೆ ಗೊಂದಲಮಯನಾಗುತ್ತ , ಉತ್ತರಗಳನ್ನಾ ಅನ್ವೇಷಿಸುತ್ತ... !

*ಸಪ್ತವರ್ಣ*

No comments:

Post a Comment