Saturday, November 19, 2011

*ನೀರೀಕ್ಷೆ*

ಮುರಿದ ಮನೆಯೊಳಗೆ
ಮೆಲ್ಲನೆ ಮುಲುಕಾಡುತಿವೆ...
ಮೌನವ ಮರೆತ ಮಾತುಗಳು...

ಕಾದು ಕಂಪಿಸುತ್ತಿವೆ
ಕಾಲದ ಕಣ್ಣು...
ಕುಳಿತಲ್ಲೆ ಕುಪ್ಪಳಿಸುತ್ತಿವೆ
ಕಾತುರದ ಕಾಲುಗಳು...


ಮಾತು ಮುರಿಯದೆ ಬರುವನೆ ?
ಬಿಲ್ಲು ಮುರಿದು ಜಾನಕಿಯ ವರಿಸಿದ ರಾಮ...
ಕಾದು ಕುಳಿತ ಶಬರಿಯ
ಅಕ್ಷಿಯ ನೀರೀಕ್ಷೆಯನು
ಹುಸಿಗೊಳಿಸದೆ...

2 comments:

  1. `ಕಾದಿರುವಳು ಶಬರಿ ರಾಮ ಬರುವನೆ೦ದು' ಶಬರಿಯ ನಿರೀಕ್ಷೆಯನ್ನು ಸೊಗಸಾಗಿ ತೆರೆದಿಡುವ ಕವನಕ್ಕಾಗಿ ಅಭಿನ೦ದನೆಗಳು ಪ್ರತಾಪ್ ಬ್ರಹ್ಮಾವರ್ ರವರೆ.

    ReplyDelete
  2. ಧನ್ಯಾವಾದಗಳು :) ಪ್ರಭಾ ಅಕ್ಕ :) ತುಂಬಾ ಸಂತೋಷವಾಯ್ತು :)

    ReplyDelete