*ಪ್ರಭುವೇ ನೀ ಹೇಳು*
ವೇಷಧಾರಿಗಳು ಬಂದರು ದಾರಿ ಬಿಡಿ ,
ಭುವಿಯನಾಳೋ ಸಾಮಂತರು ಬಂದರು, ಮರ್ಯಾದೆ ಕೊಡಿ.
ಹೊರಲು ಸಿದ್ಧ ಕೈಯಲಿ ಹೊರೆಯಾ , ಕಿತ್ತೆಸೆದು ಮುಡಿದ ಹೂವನು .,
ಸಕಲಕಲಾವಲ್ಲಭರಿವರು..
ಒಬ್ಬಗೆ ಒಂದು ಪಾತ್ರವಲ್ಲ ಮೀಸಲು ,
ಇವು , ನಿತ್ಯವೂ ಹೊರಡುತ್ತವೆ ಹೊಸತೊಂದು ಅಂಡು ಮೂಸಲು.,
"ಕೊಟ್ಟವೊ ಕೊಂಡವೊ ಅರಿವಿಲ್ಲದ ಜನಗಳು , ಪರಿಹಾರಕ್ಕಾಗಿ ಕಾಯುತ್ತಿವೆ ,
ಮತ ಪ್ರಭುವಿನ ಸೋತ ಕಂಗಳು.
ಎಷ್ಟೋ ವಾಸಿ ನಿತ್ಯಯೌವನೆಯ ಕನಸುಗಳು ,
ಅವಾದರೋ ಗಂಟು ಕಳಚುವವರೆಗಾದರೂ, ಅವಳದೇ ಕೂಸುಗಳು,
ಈವು ಕಾಸಿನ ಕಾವಿಗೆ, ಕರಗುವಾ ಅರಗಿನ ಪ್ರತಿಮೆಗಳು,
ಕ್ಷಣ-ಕ್ಷಣಕು , ಮಗ್ಗಲು ಮಗಚುವಾ ಮನಸುಗಳು..
"ಕಾರ್ಯವಾಸಿ ಕತ್ತೆ ಕಾಲು "
ಹಿಡಿಯುವದರೊಳಗೆ , ಕುದುರೆ ಜಿಗಿತದ ಗೋಳು ...
ಸಮಸ್ಯೆಗಳದೆ ಬಸಿರು ಸಾಲು ಸಾಲು ,
ಬಯಕೆಯ ಮಡಿಲಿಗೆ ಬಳೆ ತೊಡಿಸುವವರ್ಯಾರು ?
ಪ್ರಭವೇ ನೀ ಹೇಳು
(ಹಿಂದೊಮ್ಮೆ ಬರೆದದ್ದು )
No comments:
Post a Comment