Monday, November 28, 2011

*ಮತ್ತೋಂದು ಮುಂಜಾವು*

ಕಳೆದ ರಾತ್ರಿಯ ಸುಖದ ಅಮಲು

ತೊಳೆದು ಮೂಡಿ ಬಂದಿದೆ

ಮತ್ತೋಂದು ಹಗಲು ....

ಮೂಡಣದಿ ಮೌಡ್ಯಗಳ

ಕೊಳೆಯ ತೊಳೆಯಲು ಮುಗಿಲು

ಜೊತೆಯ ನೀಡಿದೆ ದಿನಕರಗೆ

ಹೆಗಲು.

Sunday, November 27, 2011

*ಇನ್ನಾಗದು*
ನಾವಿಲ್ಲದೂರಿನಲ್ಲಿ ನೀವು ಅದು ಹೇಗೆ ತಾನೆ ಇರುವಿರಿ ?
ನಮ್ಮ ಮುಗ್ಧ ಕಣ್ಣುಗಳು ಬೇಕೆ ಬೇಕು ತಾನೆ ? ನಿಮಗೆ ಕಿತ್ತುಕೊಳ್ಳಲು...

ನಮ್ಮ ಮೌನವನೆ ತಾನೆ ?
ನೀವು ದುರ್ಬಲತೆ ಎಂದುಕೊಂಡದ್ದು
ನಮ್ಮಿಚ್ಚೆ ಇಲ್ಲದೆನೆ ದುರ್ಬಳಕೆ ಮಾಡಿಕೊಂಡಿದ್ದು...

ಇನ್ನದೇಷ್ಟು ಅತ್ಯಾಚಾರಗಳನ್ನಾ ನಾವು ಕತ್ತಲ ಕೋಣೆಯೊಳಗೆ ಮೌನದ ಬೀಗವನ್ನಾ ಅಡವಿಟ್ಟು ಸುಮ್ಮನಾಗಿರಿಸಬೇಕು... ? ಅದು ಇನ್ನಾಗದ ಮಾತು ಎಚ್ಚೆತ್ತುಗೊಂಡಿದೆ ನಮ್ಮ ನರಸತ್ತ ಧಾತು

Monday, November 21, 2011

*ಭಾಷೆ*

ಮುದ್ದು ಮುಂಜಾನೆಯೊಂದು

ಸದ್ದಿರದೆ ಅರಳಿದೆ


ಮರಳಿ ಬರುವಾ

ಭರವಸೆಯ

ಭಾಷೆಯಿಂದು ಮತ್ತೆ

ನೆರವೇರಿದೆ.

Saturday, November 19, 2011

*ನೀರೀಕ್ಷೆ*

ಮುರಿದ ಮನೆಯೊಳಗೆ
ಮೆಲ್ಲನೆ ಮುಲುಕಾಡುತಿವೆ...
ಮೌನವ ಮರೆತ ಮಾತುಗಳು...

ಕಾದು ಕಂಪಿಸುತ್ತಿವೆ
ಕಾಲದ ಕಣ್ಣು...
ಕುಳಿತಲ್ಲೆ ಕುಪ್ಪಳಿಸುತ್ತಿವೆ
ಕಾತುರದ ಕಾಲುಗಳು...


ಮಾತು ಮುರಿಯದೆ ಬರುವನೆ ?
ಬಿಲ್ಲು ಮುರಿದು ಜಾನಕಿಯ ವರಿಸಿದ ರಾಮ...
ಕಾದು ಕುಳಿತ ಶಬರಿಯ
ಅಕ್ಷಿಯ ನೀರೀಕ್ಷೆಯನು
ಹುಸಿಗೊಳಿಸದೆ...

Wednesday, November 16, 2011

*ಪ್ರಭುವೇ ನೀ ಹೇಳು*
ವೇಷಧಾರಿಗಳು ಬಂದರು ದಾರಿ ಬಿಡಿ ,

ಭುವಿಯನಾಳೋ ಸಾಮಂತರು ಬಂದರು, ಮರ್ಯಾದೆ ಕೊಡಿ.

ಹೊರಲು ಸಿದ್ಧ ಕೈಯಲಿ ಹೊರೆಯಾ , ಕಿತ್ತೆಸೆದು ಮುಡಿದ ಹೂವನು .,
ಸಕಲಕಲಾವಲ್ಲಭರಿವರು..

ಒಬ್ಬಗೆ ಒಂದು ಪಾತ್ರವಲ್ಲ ಮೀಸಲು ,
ಇವು , ನಿತ್ಯವೂ ಹೊರಡುತ್ತವೆ ಹೊಸತೊಂದು ಅಂಡು ಮೂಸಲು.,

"ಕೊಟ್ಟವೊ ಕೊಂಡವೊ ಅರಿವಿಲ್ಲದ ಜನಗಳು , ಪರಿಹಾರಕ್ಕಾಗಿ ಕಾಯುತ್ತಿವೆ ,
ಮತ ಪ್ರಭುವಿನ ಸೋತ ಕಂಗಳು.

ಎಷ್ಟೋ ವಾಸಿ ನಿತ್ಯಯೌವನೆಯ ಕನಸುಗಳು ,
ಅವಾದರೋ ಗಂಟು ಕಳಚುವವರೆಗಾದರೂ, ಅವಳದೇ ಕೂಸುಗಳು,

ಈವು ಕಾಸಿನ ಕಾವಿಗೆ, ಕರಗುವಾ ಅರಗಿನ ಪ್ರತಿಮೆಗಳು,
ಕ್ಷಣ-ಕ್ಷಣಕು , ಮಗ್ಗಲು ಮಗಚುವಾ ಮನಸುಗಳು..

"ಕಾರ್ಯವಾಸಿ ಕತ್ತೆ ಕಾಲು "

ಹಿಡಿಯುವದರೊಳಗೆ , ಕುದುರೆ ಜಿಗಿತದ ಗೋಳು ...

ಸಮಸ್ಯೆಗಳದೆ ಬಸಿರು ಸಾಲು ಸಾಲು ,
ಬಯಕೆಯ ಮಡಿಲಿಗೆ ಬಳೆ ತೊಡಿಸುವವರ್ಯಾರು ?


ಪ್ರಭವೇ ನೀ ಹೇಳು

(ಹಿಂದೊಮ್ಮೆ ಬರೆದದ್ದು )

Wednesday, November 9, 2011

*ಕಲ್ಪಕ ಕವಿತೆಗಳು*2

*ಕಲ್ಪಕ ಕವಿತೆಗಳು*2

ಪ್ರೀತಿ , ನೀ ಶುಭ್ರ ಮಂಜಿನಂತೆಂದು ತಿಳಿದು,

ಎತ್ತಿಟ್ಟುಕೊಂಡೆ ಹ್ರದಯದಲಿ ...

ನೀ ಕ್ಷಣ ಕ್ಷಣಕೂ

ಕರಗಿ ನಿರಾಸೆ

ಮೂಡಿಸಿದೆ ಜೀವನದಲಿ

Friday, November 4, 2011

* ಜನನ *

ಮನಸೇ ಜನಕ

ಮೌನವೆ ಜನಕಿ

ಇವರಿರ್ವರ ಮಿಲನಕೆ

ಜನಿಸಿದ

ಪದಗಳೇ ಕವಿತೆ
ಬದುಕು ಭ್ರಮೆಗಳ ಒಂದು ತೋಟ. ಎಷ್ಟೊ ಭ್ರಮೆಗಳು ಸೇರಿ, ಒಂದು ವಾಸ್ತವಾಂಶದ ಅರಿವಿನ ಚಿತ್ರಣವನ್ನಾ ಮನಸ್ಸಿಗೆ ಕಟ್ಟಿಕೊಡುತ್ತವೆ... ಕಲ್ಪನೆಗಳಿಲ್ಲದೆ, ಭ್ರಮೆಗಳ ಹಂಗಿಲ್ಲದೆ ನಾವು ಬದುಕೊಓದು ತುಂಬಾ ಕಷ್ಟ.. ! ? . ಎಲ್ಲಾ ವಾಸ್ತವಾಂಶಗಳು ನಮ್ಮ ಅರಿವಿಗೆ ಬಂದ್ರೆ , ಬದುಕಲ್ಲೇನಿದೆ ಅನ್ನುವಂಥ ಪ್ರಶ್ನೆಗಳು ನಮ್ಮನ್ನ ಕಾಡೊದು ಸಹಜ ಅಲ್ವಾ ? . ದಾಸರು ಹೇಳಿದ ಹಾಗೆ ,"ಸಂಸಾರವೆನ್ನುವುದು ನೀರ ಮೇಲಣ ಗುಳ್ಳೆ " ನಿರಂತರ ಜನುಮ ತಳೆವ ಬುಗ್ಗೆಗಳು, ಒಂದ್ಕ್ಕೊಂದು ಜೋತೆ-ಜೋತೆಯಾಗಿ, ಜನುಮದ ಜೋಡಿಗಳಂತೆ ಇರುತ್ತವೆ , ಹಾಗೆ ಹುಟ್ಟುತ್ತವೆ , ಕ್ಶಣಕಾಲ ಸಂಚಲಿಸಿತ್ತವೆ ಮತ್ತು ಸತ್ತು ಬಿಡುತ್ತವೆ... ಸಾವು ಕೂಡ ಒಂದು ಭ್ರಮಾಲೋಕವನ್ನ ಸ್ರಷ್ಟಿಸಿ ಮನಸನ್ನ ತಲ್ಲಣಗೊಳಿಸ್ತ ಇರುತ್ತದೆ.
ಹಾಗೇ ನಿರಂತರ ಕಣ್ಣು-ಮುಚ್ಚಾಲೆಯಾಟ ನಡಿತಾನೆ ಇರುತ್ತದೆ...

ಇದೇ ಕಾರಣಕ್ಕೆ , ತಿಳಿದವರು ಕೂಡ, ಬದುಕನ್ನ ಭ್ರಮಾಲೋಕದಲ್ಲೆ ತೇಲಿಸಿಬಿಡುತ್ತಾರೆ , ತಮ್ಮ ಮಕ್ಕಳಲ್ಲಿ ಕೂಡ , ಕನಸಿನ ಬೀಜಗಳನ್ನಾ ಬಿತ್ತುತ್ತಾರೆ , ತಾವು ಕೂಡ ನಿರಂತರವಾಗಿ ಕನಸುಗಳನ್ನ ಕಾಣ್ತಾನೆ ಇರ್ತಾರೆ.

ಕೆಲವೋಂದು ಕನಸುಗಳು , ಇರುವೆಗಳ ಹುತ್ತದಂತೆ ಇರುತ್ತವೆ... ಇಲ್ಲಿ ಯಾರೊ ಕನಸುಗಳನ್ನ ಕಾಣೋರು.. ಆ ಕನಸಿನ ಅರಮನೆಯಲ್ಲಿ ಇನ್ನ್ಯಾರೊ ದರ್ಬಾರುಗಳನ್ನ ನಡೆಸ್ತ ಇರ್ತಾರೆ. ಹೀಗೆ ಈ ಕನಸುಗಳು ಸ್ರಷ್ಟಿಕ್ರಿಯಲ್ಲಿ , ಲೋಕ ಕಲ್ಯಾಣ ಕಾರ್ಯದಲ್ಲಿ ಮಹತ್ತರವಾದ ಪಾತ್ರಗಳನ್ನ ನಿರ್ವಹಿಸುತ್ತವೆ...


ಇಂದಲ್ಲ , ನಾಳೆ ನಾವೆಲ್ಲ ಸಾಯುವವರೆ , ಮತ್ತ್ಯಾಕೆ ? ನಮಗೆ ಈ ಲೋಕದ ನಂಟು ಅನ್ನುವವರಿಗೆ , ಈ ಕನಸುಗಳೆ ಮುಂದಿನ ದಾರೈಯನ್ನ ತೋರಿಸಿಕೊಡುತ್ತವೆ ಎನ್ನುವುದು ನನ್ನ ಅನಿಸಿಕೆ ... ಇನ್ನಷ್ಟು ವಿಶಯಗಳೋಂದಿಗೆ ನಾನು ನಿಮ್ಮೋಂದಿಗೆ ಮುಂದೆ... ನಮಸ್ತೆ ... :)