Saturday, October 29, 2011

ಅಳಿಸಿ ಹೋದ ಹೆಜ್ಜೆ-ಗುರುತುಗಳ ಹಿಂಬಾಲಿಸಿ ,

ವಿಳಾಸಗಳ ಸುಳಿವಿಲ್ಲದೆ

ಭ್ರಮ-ನಿರಸರಾದವರು ನಾವು...,

ಕತ್ತಲ ರಾತ್ರಿಯಲಿ
ಕಳೆದುಹೋದವರನು' ,
ಕತ್ತಿಗೆ ಮುಸುಕು ಹಾಕಿ

ಕತ್ತಲಲ್ಲೇ ಹುಡುಕ
ಹೊರಟವರು ನಾವು ,


ನಾವು ವಿಳಾಸವಿಲ್ಲದವರು,

ದಯವಿಟ್ಟು ಹುಡುಕ ಬೇಡಿ ,

ನಮ್ಮ ಪಾದಗಳನು

ಪದಗಳಲಿ...

ಅಲೆಮಾರಿ ಆತ್ಮದ

ಅಲೆಗಳು ನಾವು...


ಹೆಸರಿಗೊಂದು ಉಸುಕ

ಮನೆಯಮಾಡಿ ,

ಉಸಿರು ಬಸಿರಾಗೊವರೆಗು

ಕಾದು , ಯಾರದೊ ,

ಮೂಸೆಯೊಳಗೆ ಸೋಸಿ ಹಾಯ್ದು
ಬಂದ ಧರಣಿಯ ಬಿಟ್ಟು,

ಹೋದ ವಿಳಾಸಗಳು ಸುಳಿಯು

ಕೊಡದೆ ಹೊರಟವರು

ನಾವು,

ದಯವಿಟ್ಟು ಹುಡುಕಬೇಡಿ

ನಮ್ಮ ವಿಳಾಸಗಳ ,

ಅನಿವಾಸಿಗಳು ನಾವು...

ತಾವಿಲ್ಲದವರ ಹುಡುಕ


ಬೇಡಿ ತಾವು...

No comments:

Post a Comment