ನಿಶೆ ಮಡಿಲ ಹಸಿಗರ್ಭದೊಳು , ಮೆಲ್ಲಗೆ ಪಿಸುಗುಡುತಿವೆ ಮಂದ ನಯನ...
ಕನಸುಗಳ ಅರಮನೆಯೊಳು ಮನಸಿನಾಗಸದೊಳು , ಮ್ರದು ಮಧು-ಶಯನ...
ಉಚ್ಛ್ವಾಸ-ನಿಶ್ವಾಸದೊಳಗೆ , ಹುಟ್ಟಿ-ಸಾಯೋ ,ಬಂಧಮುಕ್ತ ಉಸಿರ ಬಡಿತ...
ಅಸಂಖ್ಯ ರೋಮದುಳಿಗಳೊಡೆಯನ, ತನು ಬಸಿರ , ಬೆವರ ಮುತ್ತಹನಿಗಳ ಬೇಲಿದಾಟೋ ಬಯಕೆಗಳ ತುಡಿತ...
ಮಂದಹಾಸ ಮಿಲನ ಮನೋಅಭಿಲಾಷೆ
ಮನೋಆಭಾಸಗಳ ಸ್ಖಲನ
ಕಲ್ಪ-ವಿಕಲ್ಪಗಳ ನಟ್ಟನಡುವಿನ ಬಟ್ಟಬಯಲಿನಲಿ , ದಿಟ್ಟ ದಿಗಂಬರ ದೊರೆಯ ಅಟ್ಟಹಾಸಕೆ , ಭಟ್ಟಿಳಿಸಿಕೊಂಡವ ಮೆತ್ತಗೆ ಜಾರಿಕೊಂಡ...
ಶುಭ್ರ ಬೆಳಕಿನ ಬಿದಿಗೆ ಚಂದ್ರಮ ಇದೀಗ ಬೀದಿಗೆ...
No comments:
Post a Comment