Thursday, May 24, 2012

ಅವ್ಯವಸ್ಥೆ

ನಿಶ್ಯಕ್ತ ನಾಯಿಮರಿಯೊಂದು
ತನ್ನ ಬಾಲವನ್ನಾ ಅಲ್ಲಾಡಿಸುತ್ತಿದೆ , ದೇಹವೇ ಅಲುಗಾಡಿಸುತಿದೆಎಂಬಂತೆ...
ನಿಯತ್ತು ಮರೆತ ನಾಯಕ ನಸುನಗುತಿರುವಾ ಮೀಸೆಯೊಳಗೆ , ಕಿಸೆತುಂಬಿದ ಖುಷಿಯೊಳಗೆ .

ಅವ್ಯವಸ್ಥೆ

ನಿಶ್ಯಕ್ತ ನಾಯಿಮರಿಯೊಂದು
ತನ್ನ ಬಾಲವನ್ನಾ ಅಲ್ಲಾಡಿಸುತ್ತಿದೆ , ದೇಹವೇ ಅಲುಗಾಡಿಸುತಿದೆಎಂಬಂತೆ...
ನಿಯತ್ತು ಮರೆತ ನಾಯಕ ನಸುನಗುತಿರುವಾ ಮೀಸೆಯೊಳಗೆ , ಕಿಸೆತುಂಬಿದ ಖುಷಿಯೊಳಗೆ .

ಬುದ್ಧ

ಮಧ್ಯರಾತ್ರಿ ಮಲಗಿದ್ದವ
ದಿಗ್ಗನೆದ್ದ .ಕುಳಿತ . ಮೇಲೆದ್ದ , ನಡೆದ ...
ನಿರ್ಧಾರ ದೃಢವಾಗಿತ್ತು , ಹಜ್ಜೆಗಳು ಬಲವಾಗಿತ್ತು .
ಅನಂತರ ಅವನಿಯಲಿ ಅವನಾದ ಬುದ್ಧ .

ಬುದ್ಧ

ಮಧ್ಯರಾತ್ರಿ ಮಲಗಿದ್ದವ
ದಿಗ್ಗನೆದ್ದ .ಕುಳಿತ . ಮೇಲೆದ್ದ , ನಡೆದ ...
ನಿರ್ಧಾರ ದೃಢವಾಗಿತ್ತು , ಹಜ್ಜೆಗಳು ಬಲವಾಗಿತ್ತು .
ಅನಂತರ ಅವನಿಯಲಿ ಅವನಾದ ಬುದ್ಧ .

Tuesday, May 22, 2012

ಮದಿರಾ ಮಂದಿರ

ಮದಿರಾ ಮಂದಿರಲ್ಲಿ
ಓಹೋ ಅದೇಷ್ಟು ಭಕ್ತರು ...
ಇಂದ್ರ ,ಧರ್ಮ , ಶರ್ಮರಂತಹ ಶಕ್ತರು...
ಇದರ ಮುಂದೆ ನಿಶ್ಯಕ್ತರು ...

ಮದಿರಾ ಮಂದಿರ

ಮದಿರಾ ಮಂದಿರಲ್ಲಿ
ಓಹೋ ಅದೇಷ್ಟು ಭಕ್ತರು ...
ಇಂದ್ರ ,ಧರ್ಮ , ಶರ್ಮರಂತಹ ಶಕ್ತರು...
ಇದರ ಮುಂದೆ ನಿಶ್ಯಕ್ತರು ...

Tuesday, May 15, 2012

ಸನ್ಮಾನ.. ? ?

ಮಾನ ಬಿಟ್ಟರೂ ...

ವರಮಾನ ಕೊಟ್ಟರೆ

ಕರೆದು ಮಾಡುವರಯ್ಯ ಸನ್ಮಾನ .

ಇದಲ್ಲವೇ ಮಾನಕ್ಕೆ
ಮಾಡುವಾ ಅವಮಾನ.

ಸನ್ಮಾನ.. ? ?

ಮಾನ ಬಿಟ್ಟರೂ ...

ವರಮಾನ ಕೊಟ್ಟರೆ

ಕರೆದು ಮಾಡುವರಯ್ಯ ಸನ್ಮಾನ .

ಇದಲ್ಲವೇ ಮಾನಕ್ಕೆ
ಮಾಡುವಾ ಅವಮಾನ.

Monday, May 14, 2012

ಓ ಚಂದಮಾಮ , ಓ ಚಂದಮಾಮ
ನೀನಿಲ್ಲಿ ಬರಬಾರದೆ......?

ಒಬ್ಬಂಟಿ ನಾನು , ಎಲ್ಲೀರುವೆ ನೀನು ? ನನಗೂಡಿ ಇರಬಾರದೆ...?

ಮನಸಲ್ಲು ನೀನೇ , ಕನಸಲ್ಲೂ ನೀನೇ ಈ ವಿರಹ ಕಹಿಯಾಗಿದೆ

ಮೆಲುಮಾತ ಹರ್ಷಕೆ ಬಿಸಿಯುಸಿರ ಸ್ಪರ್ಷಕೆ ನಿನ್ನ ಸನಿಹ ಬೇಕಾಗಿದೆ...

ಮುನಿಸನ್ನು ಮರೆತು , ಮೌನಾನಾ ಮುರಿದು ಈ ಜೀವ ಸೇರಬಾರದೆ...? ನನ್ನೋಳಗೆ ನೀನು , ನಿನ್ನೋಳಗೆ ನಾನು ಒಂದಾಗಿ ಬಾಳಬಾರದೆ...?

(ನನ್ನದೇ ಮನಸಿನ ಸ್ವರ ಸಂಯೋಜನೆ) :-)):-))

ವಿರಹಿ (ಒಂದು ಭಾವ ಪ್ರಯತ್ನ)

Wednesday, May 9, 2012

ನಿಶೆ ಮಡಿಲ ಹಸಿಗರ್ಭದೊಳು , ಮೆಲ್ಲಗೆ ಪಿಸುಗುಡುತಿವೆ ಮಂದ ನಯನ...
ಕನಸುಗಳ ಅರಮನೆಯೊಳು ಮನಸಿನಾಗಸದೊಳು , ಮ್ರದು ಮಧು-ಶಯನ...

ಉಚ್ಛ್ವಾಸ-ನಿಶ್ವಾಸದೊಳಗೆ , ಹುಟ್ಟಿ-ಸಾಯೋ ,ಬಂಧಮುಕ್ತ ಉಸಿರ ಬಡಿತ...
ಅಸಂಖ್ಯ ರೋಮದುಳಿಗಳೊಡೆಯನ, ತನು ಬಸಿರ , ಬೆವರ ಮುತ್ತಹನಿಗಳ ಬೇಲಿದಾಟೋ ಬಯಕೆಗಳ ತುಡಿತ...

ಮಂದಹಾಸ ಮಿಲನ ಮನೋಅಭಿಲಾಷೆ
ಮನೋಆಭಾಸಗಳ ಸ್ಖಲನ
ಕಲ್ಪ-ವಿಕಲ್ಪಗಳ ನಟ್ಟನಡುವಿನ ಬಟ್ಟಬಯಲಿನಲಿ , ದಿಟ್ಟ ದಿಗಂಬರ ದೊರೆಯ ಅಟ್ಟಹಾಸಕೆ , ಭಟ್ಟಿಳಿಸಿಕೊಂಡವ ಮೆತ್ತಗೆ ಜಾರಿಕೊಂಡ...
ಶುಭ್ರ ಬೆಳಕಿನ ಬಿದಿಗೆ ಚಂದ್ರಮ ಇದೀಗ ಬೀದಿಗೆ...