ನನಗೇ ನಾನೇ ಅಪರಿಚಿತನಾಗಿ ,
ರಾತ್ರಿಗಳಲಿ ಹುಡುಕುತಿರುವೆ ,
ಕಳೆದುಕೊಂಡ ನನ್ನನ್ನು , ನನ್ನೊಳಗೆ ,
ಹರಿದು ಹಂಚಿಹೋದ ಮನಸನು
ಕೂಡಿಸಿ ಗಳಿಸಿಕೊಂಡ ಕನಸನು ಕಳೆದು ಕತ್ತರಿಸಿಕೊಂಡ ಸಂಬಂಧಗಳನ್ನ
ಕತ್ತಲಲಿ ಕಣ್ಗೆ ಕಪ್ಪು ಪರದೆಗಳ
ಕಟ್ಟಿಕೊಂಡು ಹುಡುಕುತಿರುವೆ
ಸ್ಪರ್ಷಗಳಲಿ ಸಿಲುಕಿ
ಕಲ್ಪನೆಗಳಲಿ ಕುಲುಕಿ ಅರ್ಥಿಯಾಗಿ ಪಡೆದ ದಾನಿಯಾಗಿ ಧಾರೆ ಎರೆದ
ವಿಷಯ ವಸ್ತುಗಳಲಿ ನಾನು ಶೂನ್ಯ
ಹೌದು , ನನಗೆ ನಾನೇ ಅಪರಿಚಿತ ,
ಅಂದ್ಹಾಗೆ ನೀವ್ಯಾರು ? ? !
130612
ReplyDelete