Saturday, July 21, 2012

ಬದುಕು

ಈ ಮೈನಡುಗಿಸುವ ಚಳಿಗಾಳಿಗೆ ,

ನೆನಪುಗಳೇ ಅಗ್ಗೀಷ್ಟಕೆ


ದಹಿಸಿಕೊಳುವುದೊ , ಬೆಳಗಿಸಿಕೊಳುವುದೊ ,

ಅದು ಅವರವರ ಅಭೀಷ್ಟಕೆ

ನಡುವೆ
ಪತನವಾಗಲಿ ರಾತ್ರಿ
ಜತನವಾಗಲಿ ಬದುಕು ತಮ್ಮಷ್ಟಕೆ .

ಬದುಕು

ಈ ಮೈನಡುಗಿಸುವ ಚಳಿಗಾಳಿಗೆ ,

ನೆನಪುಗಳೇ ಅಗ್ಗೀಷ್ಟಕೆ


ದಹಿಸಿಕೊಳುವುದೊ , ಬೆಳಗಿಸಿಕೊಳುವುದೊ ,

ಅದು ಅವರವರ ಅಭೀಷ್ಟಕೆ

ನಡುವೆ
ಪತನವಾಗಲಿ ರಾತ್ರಿ
ಜತನವಾಗಲಿ ಬದುಕು ತಮ್ಮಷ್ಟಕೆ .

Friday, July 6, 2012

ದೇವ , ಮನಸು , ಗುರು , ಮಾರ್ಗದರ್ಶಕ

ನಿಮ್ಮ ಬತ್ತಳಿಕೆಯಲಿ
ಬಲಿತಿರುವಾ ಬಾಣ ನಾನು ...

ಸರಿಯಾದ ಗುರಿಯ ತೋರಿ
ಮುನ್ನೆಡೆಸಬೇಕು ನೀನು ...

Wednesday, July 4, 2012

ಯಾ ಅಲ್ಲಾ !!!

ಅಮೃತಶಿಲೆಯೊಳಗಿನ

ಮೃತ ಶರೀರಗಳು

ಮಾತನಾಡಲೇ ಇಲ್ಲಾ....

ಅದು ಅಮರ-ಪ್ರೇಮ ಕಥೆಯಷ್ಟೇ ಅಲ್ಲಾ...

ದುಡಿಸಿಕೊಂಡವರ್ ದುಂಡಗಾದ
ದುಡಿದು ದಣಿದು ಬೆಂಡಾದವರ ವ್ಯಥೆಯ ಕಥೆಯಿದೆ ಯಾರು ಹೇಳುವವರಿಲ್ಲಾ
ಕೇಳುವ ಕಿವಿಗಳಿಲ್ಲಾ .

ಯಾ ಅಲ್ಲಾ !!! ಯಾ ಅಲ್ಲಾ !!!