Monday, February 17, 2020

ಅಲ್ಪ ವಿಹಾರಿ

             


ಮತ್ತದೇ ಮತ್ತಿನ ಮೌನ ಮುತ್ತಿಕ್ಕುವಾಗ...

ಧುಮ್ಮಿಕ್ಕುವ ಬಯಕೆಗಳ ಹತ್ತಿಕ್ಕುವ

ನೀರವ ನೆನಪ ಅಲೆಗಳಲಿ...

ಅದೋ.. 

ಬದಿ ದಡದ ದಂಡೆಯಲ್ಲಿ

ಅಲೆಯೋ ಅಲೆಮಾರಿ ನಾನು...


ತಲುಪಿ ಯೂ ತಲುಪದಂತೆ...

ಸೋಕಿಯು ಸೋಕದಂತೆ...

ಪಡೆದೂ ಪಡೆಯದಂತೆ...


ಮತ್ತು ಮತ್ತಷ್ಟು... ಪಡೆದು

ಮೊಗೆದು.. ಮೊಗೆ ಮೊಗೆದು...
ಏನೋ ಪಡೆದಂತೆ... 

ಮತ್ತಿನ್ನೆನ್ನನೋ ಪಡೆಯಬೇಕಿತ್ತೆನ್ನೋ

ಎಂತೇನಿಸೋವಂತೆ...

ಅಸ್ಪಷ್ಟ... 

ಅಲ್ಪ ತೃಪ್ತಿಯ ಹಾದಿಯಲಿ

ನಡೆ ಮರಳಿ ಮರಳ ಗೊಡೆದೆಗೆ...

ಕುಸಿವ ವಾಸ್ತವ್ಯಕ್ಕೆ  ...

ಭ್ರ ಮೆಯ  ಬೋಣಿ ದೋಣಿ ಬದಿಗೆ...

 ಹಾಕುತ ಹೊಸ ಬಗೆಯ ಬಾಡಿಗೆಯ

 ಬಡಿಗೆ ಹುಟ್ಟು...