@ಗೋಜು....@
ಒಪ್ಪಿದರೆ ನೀವು
ಬಿಕ್ಕುವೆನು ನಾನು
ಸಿಗಬಹುದೇ ಒಪ್ಪಿಗೆ....
ಶಿಕ್ಷೆ ಎಷ್ಟಾದರೂ ಸಹಿಸುವೆನು.... ನನ್ನ
ತಪ್ಪಿಗೆ.
ಭಿಕೊ ಎನ್ನುವ ಮಾನವ ಸಂತೆಯಲಿ
ಏಕೋ ಏಕಾಂಗಿ ನಾನು...
ಅಪರೂಪಕೆ ಸಿಕ್ಕ ಮನಸುಳ್ಳ ಜನ
ನೆನಪ ಭಿತ್ತಿಯಲಿ ಅಸ್ಪಷ್ಟ ಚಿತ್ರ...
ಧರಣಿಯೊಳಗಿನ ಬಂಧಿಯೇ ನಾನು...
ಪರಿಮಾಣದ ದಾಳವೊ....?
ಇಲ್ಲಾ...
ಮುಕ್ತ ಭ್ರಮಾ ಪರಿಧಿಯೊಳಗಿನ
ಪರಮಾಣುವಿನ ಅಣುವೋ... ಅರಿಯೇ
ಬಿಕ್ಕುವೆನು...
ನಾನು..
ಗಂಡಸೆನುವ ಮುಖವಾಡ ಕಳಚಿ
ತಪ್ಪಾದರೆ ಕ್ಷಮಿಸಿ ಬಿಡಿ...