Sunday, February 23, 2025

ಭಿಕ್ಷು

ನಕ್ಕ ಅವನೊಳಗೊಬ್ಬ...

ಬಿಕ್ಕುವ ಭಿಕ್ಷುವಿದ್ದ...

ಮತ್ತು..

ಅವನು ಪರರಿಂದ ಬರಿ ನಗೆಯ 

ಭಿಕ್ಷೆಯ

ಬೇಡುವಷ್ಟೇ

ಬಡವನಾಗಿದ್ದ.....

   **ಪರಬ್ರಹ್ಮ**

Monday, February 17, 2020

ಅಲ್ಪ ವಿಹಾರಿ

ಮತ್ತದೇ ಮತ್ತಿನ ಮೌನ ಮುತ್ತಿಕ್ಕುವಾಗ...

ಧುಮ್ಮಿಕ್ಕುವ ಬಯಕೆಗಳ ಹತ್ತಿಕ್ಕುವ

ನೀರವ ನೆನಪ ಅಲೆಗಳಲಿ...

ಅದೋ.. 

ಬದಿ ದಡದ ದಂಡೆಯಲ್ಲಿ

ಅಲೆಯೋ ಅಲೆಮಾರಿ ನಾನು...

ತಲುಪಿ ಯೂ ತಲುಪದಂತೆ...

ಸೋಕಿಯು ಸೋಕದಂತೆ...

ಪಡೆದೂ ಪಡೆಯದಂತೆ...

ಮತ್ತು ಮತ್ತಷ್ಟು... ಪಡೆದು

ಮೊಗೆದು.. ಮೊಗೆ ಮೊಗೆದು...
ಏನೋ ಪಡೆದಂತೆ... 

ಮತ್ತಿನ್ನೆನ್ನನೋ ಪಡೆಯಬೇಕಿತ್ತೆನ್ನೋ

ಎಂತೇನಿಸೋವಂತೆ...

ಅಸ್ಪಷ್ಟ... 

ಅಲ್ಪ ತೃಪ್ತಿಯ ಹಾದಿಯಲಿ

ನಡೆ ಮರಳಿ ಮರಳ ಗೊಡೆದೆಗೆ...

ಕುಸಿವ ವಾಸ್ತವ್ಯಕ್ಕೆ  ...

ಭ್ರ ಮೆಯ  ಬೋಣಿ ದೋಣಿ ಬದಿಗೆ...

 ಹಾಕುತ ಹೊಸ ಬಗೆಯ ಬಾಡಿಗೆಯ

 ಬಡಿಗೆ ಹುಟ್ಟು...

Tuesday, January 1, 2019

ಗೋಜು

ಇದೋ  ಈ  ಕಡೆಗೊಂದು  ದಡ

ಅದೋ  ಆ ಕಡೆಗೊಂದು  ದಡ

ನಡುವೆ  ಹರಿವ  ಕುಡಿವ  ನದಿ

ನೀರಾಗಬೇಕು  ನಾ...

ಆವಿಯಾಗುವ  (ಮೌನಿಯಾಗುವ ) ಮುನ್ನ 

ಪ್ರತಾಪ್  ಬ್ರಹ್ಮಾವರ್.

Friday, August 31, 2018

@ಗೋಜು....@

@ಗೋಜು....@

ಒಪ್ಪಿದರೆ  ನೀವು

ಬಿಕ್ಕುವೆನು ನಾನು

ಸಿಗಬಹುದೇ ಒಪ್ಪಿಗೆ....

ಶಿಕ್ಷೆ  ಎಷ್ಟಾದರೂ ಸಹಿಸುವೆನು.... ನನ್ನ 

ತಪ್ಪಿಗೆ.

ಭಿಕೊ ಎನ್ನುವ  ಮಾನವ ಸಂತೆಯಲಿ

ಏಕೋ ಏಕಾಂಗಿ ನಾನು...

ಅಪರೂಪಕೆ ಸಿಕ್ಕ ಮನಸುಳ್ಳ ಜನ

ನೆನಪ ಭಿತ್ತಿಯಲಿ ಅಸ್ಪಷ್ಟ ಚಿತ್ರ...

ಧರಣಿಯೊಳಗಿನ  ಬಂಧಿಯೇ ನಾನು...

ಪರಿಮಾಣದ ದಾಳವೊ....?

ಇಲ್ಲಾ...

ಮುಕ್ತ ಭ್ರಮಾ ಪರಿಧಿಯೊಳಗಿನ

ಪರಮಾಣುವಿನ ಅಣುವೋ... ಅರಿಯೇ

ಬಿಕ್ಕುವೆನು...

ನಾನು..

ಗಂಡಸೆನುವ ಮುಖವಾಡ ಕಳಚಿ

ತಪ್ಪಾದರೆ ಕ್ಷಮಿಸಿ ಬಿಡಿ...

Monday, June 11, 2018

Nenapu

ಮಳೆಗಾಲ

ಕೂಡಿಟ್ಟ ನೆನಪುಗಳ ಕಾಪಿಡುವ

ಕಪಾಟು...

ಕ್ಷಣಕಾಲ  ತೆಗೆದಿಡು...

ಹರಡುವ ಸ್ಮರಣಿಕೆಗೆ

ಮುಚ್ಚಿಟ್ಟ ಅಮ್ಮನ ನಶ್ಯದ ಡಬ್ಬಿಯೊಳಗಿನ

ಹಿತ ಘಾಟು...

ಪ್ರತಾಪ್ ಬ್ರಹ್ಮಾವರ್..

Monday, May 21, 2018

ಹುಷಾರು.....

ಹುಷಾರು.....

ಬರಬಹುದು ನಿಮಗೆ

ಅಪರಿಚಿತ ದೂರವಾಣಿ ಕರೆ....

ಯಾಮಾರಿದರೆ

ಬೀಳೊತ್ತೇ

ನಿಮ್ಮ ಉಳಿತಾಯ ಖಾತೆಗೆ ಬರೆ..

Sunday, August 13, 2017

Hmmm

ಹೇಳೋ ಮಾತ  ಕೇಳೊ

ಕಿವಿಯೊಂದುಬೇಕು ತಾಯಿ ಹೃದಯಕೆ...

ಸುಖಾ ಸುಮ್ಮನೆ

ಹುಡುಕಬೇಡಿ ವಿಶೇಷ ವಿಷಯಕೆ

ಹ್ಮ್...ಹ್ಮ್...
ಹ್ಮ್ಂಗುಟ್ಟುವಿಕೆ....

ಸಾಕೆ ಸಾಕು...

ನಾಲ್ಕೆ ನಾಲ್ಕು...

ಉಲ್ಲಾಸ ಸಂತೋಷ ವದನಕೆ...

ಪ್ರತಾಪ್ ಬೃಹ್ಮಾವರ್..

Monday, July 17, 2017

Novu...

ನೋವು...

ಒಳ    ಉಳಿದರೆ   ವ್ಯಥೆ....

ಹೊರ ಹರಿದರೆ ಕವಿತೆ....

ಒಳಗುಳಿದರೆ  ವ್ಯಥೆ...

ಹೊರಗರಿದರೆ ಕವಿತೆ...

Sunday, March 19, 2017

ನೀನಾಗಿದ್ದರೆ...

ನೂರು ಕವಿತೆಗಳ ಬರೆಯಬಲ್ಲೆ...

ನೀ ಜೊತೆಗಿದ್ದರೆ...

ನನ್ನ ಹೃದಯ ಬಡಿತಗಳ...

ಕಾರಣ

ನೀನಾಗಿದ್ದರೆ.....

ಪ್ರ.ಬ್ರಹ್ಮ...

Thursday, March 9, 2017

ಪ್ರ.ಬ್ರಹ್ಮ..1

ಕನಸಿನರಮನೆಯೊಳಗೆ....

ಮುನಿಸ ಮೌನ ಮೆರವಣಿಗೆ..

ಕಲ್ಪನೆಯೊ

ವಾಸ್ತವವೊ...

ಬರ ಬರದಂತೆ  ಸಾಗಲಿ... 

ನಿನ್ನ ಕನ್ನಡ ಪದ ಬರವಣಿಗೆ...

Saturday, December 29, 2012

@ಪ್ರಳಯಕೂ ಮುನ್ನಾ@ ಅತ್ತ ಧರಣಿ ಮೈ ಹಸಿ ಹಸಿ , ಬಿಸಿ ಬಿಸಿ ಮದವೆತ್ತ ಮುಕ್ಕಣ್ಣರಿಗೆ ಮೈಯೇ ಮಹಡಿ ಮಹಲುಗಳ ಅಮಲು... ಮಾನವಂತ ಮುಗುದೆಗೆ ಪ್ರತಿ ನಡೆಗು ಮಡಿಯ ನುಡಿಯೇ ಮುನ್ನುಡಿ .... ಅದೇಷ್ಟು ವರುಷ ಕಾದಾಳು ? ! ಕಂಡಾಳು ?ಕಾಲ್ಧೂಳಿಗೂ ಸಮನಿಲ್ಲದ ಮೃಗ ಮಾನವನ ತುಳಿತ ,? ಸಿಡಿಯುದಿದ್ದರೆ ಸಿಡಿದುಬಿಡು ಸುಡುವಂತೇ ಅವನ... ಸೃಷ್ಠಿಯಾಗಲಿ ಮತ್ತೇ ಹೊಸತನ ದ ಜೀವನ...

Friday, December 28, 2012

Saturday, July 21, 2012

ಬದುಕು

ಈ ಮೈನಡುಗಿಸುವ ಚಳಿಗಾಳಿಗೆ ,

ನೆನಪುಗಳೇ ಅಗ್ಗೀಷ್ಟಕೆ

ದಹಿಸಿಕೊಳುವುದೊ , ಬೆಳಗಿಸಿಕೊಳುವುದೊ ,

ಅದು ಅವರವರ ಅಭೀಷ್ಟಕೆ

ನಡುವೆ
ಪತನವಾಗಲಿ ರಾತ್ರಿ
ಜತನವಾಗಲಿ ಬದುಕು ತಮ್ಮಷ್ಟಕೆ .

ಬದುಕು

ಈ ಮೈನಡುಗಿಸುವ ಚಳಿಗಾಳಿಗೆ ,

ನೆನಪುಗಳೇ ಅಗ್ಗೀಷ್ಟಕೆ

ದಹಿಸಿಕೊಳುವುದೊ , ಬೆಳಗಿಸಿಕೊಳುವುದೊ ,

ಅದು ಅವರವರ ಅಭೀಷ್ಟಕೆ

ನಡುವೆ
ಪತನವಾಗಲಿ ರಾತ್ರಿ
ಜತನವಾಗಲಿ ಬದುಕು ತಮ್ಮಷ್ಟಕೆ .

Friday, July 6, 2012

ದೇವ , ಮನಸು , ಗುರು , ಮಾರ್ಗದರ್ಶಕ

ನಿಮ್ಮ ಬತ್ತಳಿಕೆಯಲಿ
ಬಲಿತಿರುವಾ ಬಾಣ ನಾನು ...

ಸರಿಯಾದ ಗುರಿಯ ತೋರಿ
ಮುನ್ನೆಡೆಸಬೇಕು ನೀನು ...

Wednesday, July 4, 2012

ಯಾ ಅಲ್ಲಾ !!!

ಅಮೃತಶಿಲೆಯೊಳಗಿನ

ಮೃತ ಶರೀರಗಳು

ಮಾತನಾಡಲೇ ಇಲ್ಲಾ....

ಅದು ಅಮರ-ಪ್ರೇಮ ಕಥೆಯಷ್ಟೇ ಅಲ್ಲಾ...

ದುಡಿಸಿಕೊಂಡವರ್ ದುಂಡಗಾದ
ದುಡಿದು ದಣಿದು ಬೆಂಡಾದವರ ವ್ಯಥೆಯ ಕಥೆಯಿದೆ ಯಾರು ಹೇಳುವವರಿಲ್ಲಾ
ಕೇಳುವ ಕಿವಿಗಳಿಲ್ಲಾ .

ಯಾ ಅಲ್ಲಾ !!! ಯಾ ಅಲ್ಲಾ !!!